Tuesday, 12 July 2011

ಮಡಿ

ಬೇಡ ......ದೇವರ ಮನೆಯ ದೀಪ ಹಚ್ಚಬೇಡ
ಬೆಳಗಿನಿಂದ ಹೊರಗೆಲ್ಲ ಸುತ್ತಾಡಿ
ಮೀಟಿಂಗಿನಲ್ಲಿ ಯಾರ್ ಯಾರದೋ ಕೈಕುಲುಕಿ
ಕ್ಯಾಂಟೀನಿನಲ್ಲಿ ಯಾರ್ ಯಾರೋ ಮಾಡಿದ ಅಡಿಗೆ ತಿಂದು
ಬಸ್ಸಲ್ಲಿ ಯಾರ್ ಯಾರ ಜೊತೆಗೋ ಕುಳಿತು ಬಂದವಳು
ಮೈಲಿಗೆಯಾದಿತು.............
ಆಙೆ ಮೀರಿದವರುಂಟೇ ??

ದೇವರ ಮನೆಯ ಬಿಟ್ಟು ಹೊರಗೆಲ್ಲ ದೀಪ ಹಚ್ಚಿದಳು
ಮಡಿಪೆಟ್ಟಿಗೆಯ ತುಂಬ ಕತ್ತಲು....
ಗಂಡಕೀ ನದಿಯಲ್ಲಿ ಒಗೆದ ಬಟ್ಟೆಗಳ ನೆನೆದು ನಕ್ಕಿತು ಸಾಲಿಗ್ರಾಮ