Sunday, 14 March 2010

ಶೂನ್ಯ

ಜೀವನ ಒಂದು ಭೀಕರ ಸಮರ
ನಿಂತು ಎದೆಯೊಡ್ಡಿ ಎದುರಿಸಬೇಕು
ಧೀರ ಗಂಭೀರ ಹಿಮಾಲಯದಂತೆ .........
ಘನಿಸಿ ಹಿಮವಾದಳು ಪುಟ್ಟ ಹುಡುಗಿ

ಜೀವನ ಒಂದು ದುರ್ಗಮ ಪಯಣ
ಅಡೆತಡೆಗಳ ದಾಟಿ ಮುನ್ನುಗ್ಗಬೇಕು
ನಿಲ್ಲದೆ ಹರಿವ ನದಿಯಂತೆ ..........
ಕರಗಿ ನೀರಾದಳು ಪುಟ್ಟ ಹುಡುಗಿ

ಜೀವನ ಒಂದು ಮಹಾಯಾಗ
ಬೆಂಕಿಯಲಿ ಬೆಂದು ಹಗುರಾಗಬೇಕು
ಉರಿವ ಹೋಮದ ಧೂಮದಂತೆ ..........
ದಹಿಸಿ ಆವಿಯಾದಳು ಪುಟ್ಟ ಹುಡುಗಿ

ಗಾಳಿಯಲಿ ತೇಲಿ ದೂರ ಸಾಗಿದಳು
ಮೇಲೆ.......... ಬಹು ಮೇಲೇರಿದಳು
ಶೂನ್ಯದೋಳು ಲೀನವಾದಳು ಪುಟ್ಟ ಹುಡುಗಿ

ಪಾರಾಯಣ ನಿಲ್ಲಿಸಿ, ವ್ಯಾಸಪೀಠದ ಮೇಲೆ ಕೈಯ್ಯೂರಿ
ನಡುಮನೆಯೊಳಗಿ ಇಣುಕಿ ನೋಡಿದರು ರಾಯರು......

"ಅರೆ ಎಲ್ಲಿ ಹೋದಳು ನಮ್ಮ ಪುಟ್ಟಿ?
ಇಲ್ಲೆ ಕುಳಿತು ನಾನು ಹಾಕಿದ
ಕೂಡಿ ಕಳೆಯುವ ಲೆಕ್ಕ ಬಿಡಿಸುತ್ತಿದ್ದವಳು?!"

9 comments:

V.R.BHAT said...

ಭಾವನೆಗಳು ಚೆನ್ನಾಗಿವೆ ನಿಮ್ಮೀ ಹಾಡಲ್ಲಿ

ಮುತ್ತುಮಣಿ said...

! ಏನಿದು ಇದ್ದಕ್ಕಿದ್ದ ಹಾಗೆ? ಯಾಕೆ ಕವನ ಹುಟ್ಟಿತು ಅಂತ ಕೇಳಬಹುದಾ?

V.R.BHAT said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

Geetha said...

@ ವಿ.ಆರ್.ಭಟ್
ಧನ್ಯವಾದಗಳು ಸರ್

@ ಮುತ್ತುಮಣಿ
ಯಾಕೋ ಗೊತ್ತಿಲ್ಲ ...

ಸುಧೇಶ್ ಶೆಟ್ಟಿ said...

naanu E kavanakke comment barediddenalla... yaake publish maadilla?

Geetha said...

@ ಸುಧೇಶ್ ಶೆಟ್ಟಿ
Sudhesh nimma comment nanage sikkilla :( nanna mailbox mathe check madide...yelli miss aythu?

ಜಲನಯನ said...

ಭಾವನೆಗಳು ...ಹೇಗೆ ..ಎನ್ನುವುದಕ್ಕೆ ನಿಮ್ಮ ಕವನ ದಿಶೆ ನೀಡುತ್ತಿದೆ...ಧೀರ ಹಿಮಾಲಯದಂತೆ ಘನಿಸಿ ಹಿಮವಾದಳು ಪುಟ್ಟ ಹುಡುಗಿ...ಇದಕ್ಕೆ ಉದಾಹರಣೆ...ಚನ್ನಾಗಿದೆ...

ಸುಧೇಶ್ ಶೆಟ್ಟಿ said...

full gaayab aagibittideeera... paththene ilvalla maaraayre!

Geetha said...

manassu, buddhige samayada abhaava bandide maarayre....yentha maduvudu...