ಝಗಮಗಿಸುವ ದೀಪಗಳ ಮರೆಯಲ್ಲಿ
ಮಂಕಾದ ಬಿದಿಗೆಯ ಚಂದ್ರ
ಹೊಗೆ, ಧೂಳುಗಳ ನಡುವೆ ಸಿಲುಕಿದ
ಸಪ್ಪೆ ಸಂಜೆಯ ಗಾಳಿ
ಗೌಜು ಗದ್ದಲದ ಚೌಕದ ಸುತ್ತ
ಲಘುಬಗೆಯ ಜನರಿಗಾಗಿ ಬಗೆಬಗೆಯ ತಿನಿಸುಗಳು
ಭೇಲು, ಗೋಬಿ - ಚಾಟು, ಚೈನೀಸುಗಳ ಮಧ್ಯೆ
ಒಂದು ಹಳೆಯ ಬಡಕಲು ಗಾಡಿ......
ಮಂಕಾದ ಬಿದಿಗೆಯ ಚಂದ್ರ
ಹೊಗೆ, ಧೂಳುಗಳ ನಡುವೆ ಸಿಲುಕಿದ
ಸಪ್ಪೆ ಸಂಜೆಯ ಗಾಳಿ
ಗೌಜು ಗದ್ದಲದ ಚೌಕದ ಸುತ್ತ
ಲಘುಬಗೆಯ ಜನರಿಗಾಗಿ ಬಗೆಬಗೆಯ ತಿನಿಸುಗಳು
ಭೇಲು, ಗೋಬಿ - ಚಾಟು, ಚೈನೀಸುಗಳ ಮಧ್ಯೆ
ಒಂದು ಹಳೆಯ ಬಡಕಲು ಗಾಡಿ......
ಸಣ್ಣ ಕುಲುಮೆಯ ತಿರುವಿ ಗಾಳಿಯನೂದಿ
ಇದ್ದಿಲ ಕೆಂಡ ಮಾಡುವ ಮುದುಕ
ಹಗುರಾಗಿ ಹಾರಿ, ಹಳದಿ ಬೆಳಕಿನಲೆಯಲಿ ತೇಲುವ
ಕಪ್ಪು ಹುಡಿ, ಕೆಂಪು ಕಿಡಿ.
"ಖಾರ ಹೆಚ್ಚಾಗಿರಲಿ...." ತುಟಿ ಸವರಿ-ಕೊಳ್ಳುವವನಾಜ್ಞೆ
ಯಾರೋ ನರಳುವ ಸದ್ದು.....
ಇದ್ದಿಲ ಕೆಂಡ ಮಾಡುವ ಮುದುಕ
ಹಗುರಾಗಿ ಹಾರಿ, ಹಳದಿ ಬೆಳಕಿನಲೆಯಲಿ ತೇಲುವ
ಕಪ್ಪು ಹುಡಿ, ಕೆಂಪು ಕಿಡಿ.
"ಖಾರ ಹೆಚ್ಚಾಗಿರಲಿ...." ತುಟಿ ಸವರಿ-ಕೊಳ್ಳುವವನಾಜ್ಞೆ
ಯಾರೋ ನರಳುವ ಸದ್ದು.....
"ಅಯ್ಯೋ..ಅಮ್ಮಾ...ತಾಳಲಾರೆನು..." ಎಂದು
ಎಳೆಯ ಜೋಳದ ಕೂಗು......!
"ಉರಿವ ಗಾಯಕ್ಕೆ ಉಪ್ಪು...ಗಾದೆಯ ಮಾತು
ಸುಟ್ಟ ಗಾಯದ ಮೇಲೆ ಅಚ್ಚ ಖಾರದ ಪುಡಿ.... ಬದುಕಿಹೆನು ಸತ್ತು"
ಸುಟ್ಟೋ, ಬೆಂದೋ.. ಮುಗಿಯಲೇ ಬೇಕಲ್ಲ ನಿನ್ನ ಕಥೆ!
"ಹಾಗೇನಿಲ್ಲ...............
ಹಾಗೆ ಆಗಬೇಕೆಂದಿಲ್ಲ............
ನನ್ನ ನೆರೆಯವನೊಬ್ಬ ಅಲ್ಲಿಯೇ ಉಳಿದ
ದಪ್ಪ, ದುಂಡನೆ ಕಾಳುಗಳವ..ಮತ್ತೆ ಬಿತ್ತುವರವನ...
ಕಾಳು ಮಣಿಮುತ್ತಾಗಿ, ನೂರು, ಸಾವಿರವಾಗಿ....
ತೆನೆದೂಗಿ ಬಾಳುವನು!’
ಚಿಟ್ಟೆಂದು ಪುಟಿಯಿತು ಒಂದೆರಡು ಕಾಳು ಕಲ್ಪನೆಯ ಖುಷಿಯಲೆ....
ಉರಿವ ಕೆಂಡದ ಮೇಲೂ ಮೆರೆವ ಕನಸು!!
"ಅದೃಷ್ಟವಿರಬೇಕಲ್ಲಾ...."
ಎಳೆಯ ಜೋಳದ ಕೂಗು......!
"ಉರಿವ ಗಾಯಕ್ಕೆ ಉಪ್ಪು...ಗಾದೆಯ ಮಾತು
ಸುಟ್ಟ ಗಾಯದ ಮೇಲೆ ಅಚ್ಚ ಖಾರದ ಪುಡಿ.... ಬದುಕಿಹೆನು ಸತ್ತು"
ಸುಟ್ಟೋ, ಬೆಂದೋ.. ಮುಗಿಯಲೇ ಬೇಕಲ್ಲ ನಿನ್ನ ಕಥೆ!
"ಹಾಗೇನಿಲ್ಲ...............
ಹಾಗೆ ಆಗಬೇಕೆಂದಿಲ್ಲ............
ನನ್ನ ನೆರೆಯವನೊಬ್ಬ ಅಲ್ಲಿಯೇ ಉಳಿದ
ದಪ್ಪ, ದುಂಡನೆ ಕಾಳುಗಳವ..ಮತ್ತೆ ಬಿತ್ತುವರವನ...
ಕಾಳು ಮಣಿಮುತ್ತಾಗಿ, ನೂರು, ಸಾವಿರವಾಗಿ....
ತೆನೆದೂಗಿ ಬಾಳುವನು!’
ಚಿಟ್ಟೆಂದು ಪುಟಿಯಿತು ಒಂದೆರಡು ಕಾಳು ಕಲ್ಪನೆಯ ಖುಷಿಯಲೆ....
ಉರಿವ ಕೆಂಡದ ಮೇಲೂ ಮೆರೆವ ಕನಸು!!
"ಅದೃಷ್ಟವಿರಬೇಕಲ್ಲಾ...."
ಮರುಗದಿರು,
ನಿನ್ನ ತಪ್ಪೇನಿಲ್ಲ...
ಬಿದ್ದಿರಬಹುದು ಅದಕೆ ಹೆಚ್ಚು ಗೊಬ್ಬರ,
ನಿನ್ನ ತಪ್ಪೇನಿಲ್ಲ...
ಬಿದ್ದಿರಬಹುದು ಅದಕೆ ಹೆಚ್ಚು ಗೊಬ್ಬರ,
ಹೀರಿರಬಹುದು ಹೆಚ್ಚು ಗಾಳಿ, ನೀರು, ಸೂರ್ಯರಶ್ಮಿ..
ಅದೃಷ್ಟ ಎಲ್ಲರದಲ್ಲ.....
ಅಥವ
ಅದೃಷ್ಟ ನಿನ್ನದೆಯೋ?!
ಮರಳಿ ಬಾಯ್ತೆರೆಯುವ ಮುನ್ನ..
ಅದರ ಸಿಪ್ಪೆಯಲೆ ಜೋಳವ ಬಿಗಿದು ಸುತ್ತಿ
ಕೊಟ್ಟು ಬಿಟ್ಟನು ಬಿಳಿಯ ಗಡ್ಡದ ಮುದುಕ
.
.
ಮತ್ತೆ ಕುಲುಮೆಯ ತಿರುವಿ, ಗಾಳಿಯನೂದಿ
ಇದ್ದಿಲ ಕೆಂಡ ಮಾಡುವ ಕೆಲಸ ಅವ್ಯಾಹತ......
ಇದ್ದಿಲ ಕೊನೆಯೊ ? ಕೆಂಡದ ಮರುಹುಟ್ಟೋ ?
ಎರಡು ಒಂದೆಯೊ? ಒಂದರೊಳಗೆರಡೋ?
ಒಳ-ಹೊರಗು ತಿಳಿಯದ,
ಸೂತ್ರ- ಸಿದ್ಧಾಂತಗಳಿಗೆ ನಿಲುಕದ
ಮಾಬಿಯಸ್ ಬಳೆಯೋ?!!
ಒಳ-ಹೊರಗು ತಿಳಿಯದ,
ಸೂತ್ರ- ಸಿದ್ಧಾಂತಗಳಿಗೆ ನಿಲುಕದ
ಮಾಬಿಯಸ್ ಬಳೆಯೋ?!!
9 comments:
ಹೇ, ಇದು ತುಂಬಾ ಚೆನ್ನಾಗಿದೆ! ಕನ್ನಡದ ಪದಗಳ ಬಲಕೆ ಸೂಪರ್... ಆದರೆ ಅದೇನು ’ಮಾಬಿಯಸ್’ ಬಳೆ? ಅರ್ಥ ಆಗಲಿಲ್ಲ.
ಹೆ ಹೇ..ಇದೇನು ಎಲ್ಲ ಪದ್ಯಕ್ಕೂ ಸೂಪರ್ ಅಂತ ಬರೀತೀಯ, ಮುಂದಿನ ಸಲ ಬೇರೆ ಪದ ಬರಿ. ಈ ಸಲ ಕನ್ನಡ ಪಂಟಿ ರೆಡ್ ಹ್ಯಾಂಡಾಗಿ ಸಿಕ್ ಹಾಕೊಂಡೆ..ಸ್ಪೆಲ್ಲಿಂಗ್ ಮಿಸ್ಟೇಕು...ಪದಗಳ "ಬಲಕೆ"..... ಹಹಹ
ಜೋಕ್ಸ್ ಅಪಾರ್ಟ್, ಮಾಬಿಯಸ್ ಬಳೆ ಅಂದರೆ ಒಂದೆ ಮೇಲ್ಮೈ(surface), ಒಂದೆ ಬೌಂಡರಿ ಇರುವ ವಿಚಿತ್ರ ಬಳೆ.
ಒಂದು 20 cm ಉದ್ದ, 3-4 cm ಅಗಲ ಇರೋ ಪೇಪರ್ ತೊಗೊ, ಒಂದು ಸಲ ತಿರುಗಿಸಿ (half a twist) ತುದಿಗಳನ್ನ ಅಂಟಿಸು. ಇದೇ ಮಾಬಿಯಸ್ ಬಳೆ. ಈಗ ಸಾಮಾನ್ಯ ಬಳೆಯ ಹಾಗೆ ಅದಕ್ಕೆ - ಪರಿಧಿ (circumference), ವ್ಯಾಸ (dia), ಒಳ ಮೈ, ಹೊರಮೈ ಅಳೆಯಲು ಸಾಧ್ಯ ಇಲ್ಲ ! ಬಳೆಯ ಮೇಲೆ ಒಂದು ಗೆರೆ ಏಳೆದು ನೋಡು -ಅದು ಎಲ್ಲಿ ಶುರುವಾಯ್ತೋ ಅಲ್ಲೇ ಬಂದು ನಿಲ್ಲತ್ತೆ ಆದ್ರೆ ಪೂರ್ತಿ surface cover ಮಾಡಿರುತ್ತೆ.
ಸಾಧ್ಯವಾದ್ರೆ ಈ ವಿಡಿಯೊ ಲಿಂಕ್ ನೋಡು.http://www.metacafe.com/watch/331665/no_magic_at_all_mobius_strip/
ಸೂಪರ್ ಆಗಿದೆ ;)
ತಲಕಾಡಲ್ಲಿ ನೋಡಿದ ಒಂದೆ ಕಲ್ಲಲ್ಲಿ ಕೆತ್ತಿದ್ದ ಬಳೆಗಳು ಜ್ಝಾಪಕ ಬಂತಾ ?
ಗೀತಾ ಅವರೇ...
"ಉರಿವ ಕೆಂಡದ ಮೇಲೂ ಮೆರೆವ ಕನಸು!!" ಇದ೦ತೂ ತು೦ಬಾ ಚೆನ್ನಾಗಿದೆ...
ಕವನದ ವಸ್ತು ಸಣ್ಣದಾದ ಮುಸುಕಿನ ಜೋಳವಾದರೂ ಕವನವನ್ನು ನೀವು ಬೆಳೆಸುವ ಪರಿ ಅನನ್ಯ.... ನಿಮ್ಮ "The Hill" ಕವನದಲ್ಲೂ ಈ ಲಕ್ಷಣವನ್ನು ಕಾಣಬಹುದು....
ಚೆ೦ದದ ಕವನ.
@ ಸುಧೇಶ್,
ನಿಮಗೆ ಪದ್ಯ ಇಷ್ಟವಾಗಿದ್ದಕ್ಕೆ ತುಂಬ ಖುಷಿಯಾಯ್ತು :) ಈ ಪದ್ಯ ಕೂಡ the hillನಂತೆ ಇಂಗ್ಲೀಶಲ್ಲೆ ಹುಟ್ಟಿದ್ದು, ಹೇಗೊ ಮಾಡಿ ಕನ್ನಡಕ್ಕೆ ತಂದು ಬಿಟ್ಟಿರುವೆ...ಹಹಹ
ಈ ಕವನವನ್ನು ಇ೦ಗ್ಲಿಷಿನಲ್ಲಿ ಬರೆದಿರಬಹುದು ಅ೦ತ ಊಹಿಸಿದ್ದೆ... ಯಾಕೆ೦ದರೆ ಈ ಕವನ ನಿಮ್ಮ ಇ೦ಗ್ಲಿಷ್ ಕವನಗಳ ಧಾಟಿಯಲ್ಲಿಯೇ ಇದೆ...
ಕನ್ನಡಕ್ಕೆ ತರುವ ನಿಮ್ಮ ಪ್ರಯತ್ನ ಶ್ಲಾಘನೀಯ...
ಕನ್ನಡದಲ್ಲೂ ತು೦ಬಾ ಚೆನ್ನಾಗಿ ಬ೦ದಿದೆ..
ಗೀತಾ
ಅದು ಹೇಗೆ ಈ ಕವನ ನನ್ನ ಕಣ್ಣಿಂದ ಇಷ್ಟು ದಿನ ಮರೆಯಾಗಿತ್ತೋ ಗೊತ್ತಿಲ್ಲ. ಈ ದಿನ ನೋಡಿದೆ. ಕನ್ನಡದ ಮುಸುಕಿನ ಜೋಳ ಪದ ನೋಡಿ ‘ಓಹೋ ಈ ಬಾರಿ ಗೀತಾಳದು ಕನ್ನಡದ ಕವನ’ ಎಂದು ಖುಷಿಯಾಯಿತು. ಕವನ ಪ್ರಾರಂಭ ಬಹಳ ಚೆನ್ನಾಗಿದೆ. ನಗರ ಜೀವನದ ಟೊಳ್ಳುತನ ಬಹಳಚೆನ್ನಾಗಿದೆ. ನೀರಸ ಪ್ರಕೃತಿಯ ನಡುವೆಯೇ ಯಾಂತ್ರಿಕವಾಗಿ ಸಾಗುವ ಚಾಟ್ ಗಳ ವ್ಯಾಪಾರದ ಚಿತ್ರಣವೂ ಚೆನ್ನಾಗಿದೆ.
ಮುಂದೆ ಆ ಜೋಳದ ಆಕ್ರಂದನ ಮನಸ್ಸಿಗೆ ತುಂಬಾ ನೋವುಂಟು ಮಾಡಿತು. ಮನಮುಟ್ಟುವ ಕವನ. ಹಾಗೆ ನೋಡಿದರೆ ನಾವು ಪ್ರತಿನಿತ್ಯ ಮಾರುಕಟ್ಟೆಯಿಂದ ತರುವ fresh ತರಕಾರಿಗಳನ್ನು ಕತ್ತರಿಸುವಾಗ ಅವೂ ಹೀಗೆ ಮೊರೆಯಿಡಬಹುದೇನೋ ಅಲ್ಲವೇ ?
ಕನ್ನಡದಲ್ಲಿ ನೀನು ಚೆನ್ನಾಗಿ ಬರವಣಿಗೆ ಮುಂದುವರೆಸಬಹುದು.
@ ಚಂದ್ರಕಾಂತ ಎಸ್,
ಧನ್ಯವಾದಗಳು ಮೇಡಮ್. ಕವನ ಮೆಚ್ಚಿದ್ದಕ್ಕೆ ಮತ್ತು ಕನ್ನಡದಲ್ಲಿ ಬರೆಯಲು ಹಸಿರು ನಿಶಾನೆ ತೋರಿಸಿದ್ದಕ್ಕೆ :)
ಕವನದ ಜೋಳ ಹದವಾಗಿ ಬೆ೦ದಿದೆ. ಉಪ್ಪು, ಹುಳಿ, ಕಾರ, ಎಲ್ಲ ಜೀವನದ ಬೇವು-ಬೆಲ್ಲವನ್ನು ತಿಳಿಸಿದೆ.
first time comment maadidini!!
@veena,
ಓಹೊಹೋ....ಇದೇನು ಮೇಡಮ್ ಅವರಿಗೆ ಪದ್ಯ ಓದಿ, ಕಮೆಂಟ್ ಬರೆಯೋವಷ್ಟು ಸಮಯ ಸಿಕ್ಬಿಟ್ಟಿದೆ !!!
thanks for the comment V :)
Post a Comment